ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘವು 1985ರಲ್ಲಿ ವಿದ್ಯುಕ್ತವಾಗಿ ರಚನೆಗೊಂಡಿದ್ದು, ಸಂಘದ ಸ್ಥಾಪನೆಗೆ ಕಾರ್ಯನಿರ್ವಹಿಸಿದವರಾದ ದಿ: ಕೆ.ಕೆಂಚೇಗೌಡ, ಆರೋಗ್ಯ ಇಲಾಖೆ, ಶ್ರೀ ಬಿ.ಎಲ್.ಲಿಂಗೇಗೌಡ, ಆರೋಗ್ಯ ಇಲಾಖೆ, ಶ್ರೀ ಜಯದೇವಪ್ಪ, ಕೃಷಿ ಇಲಾಖೆ, ದಿ: ಮಂಜೇಗೌಡ್ರು, ರಾಜ್ಯ ಉಚ್ಛ ನ್ಯಾಯಾಲಯ, ಶ್ರೀ ಎಸ್.ರೇಣುಕಾರಾಧ್ಯ, ಕರ್ನಾಟಕ ಸರ್ಕಾರ ಸಚಿವಾಲಯ, ಇವರುಗಳು ಅವಿರತವಾಗಿ ನಡೆಸಿದ ಪ್ರಯತ್ನವಾಗಿ ಸಂಘವು ರಾಜ್ಯದಲ್ಲಿ ನೆಲೆಗೊಳ್ಳಲು ಸಾಧ್ಯವಾಯಿತು. ಹಾಗೂ ಜಿಲ್ಲೆಗಳಿಗೆ ಪ್ರವಾಸ ಸಂಘಟಿಸಿದ್ದರಿಂದ ಸಂಘವನ್ನು ಬಲಪಡಿಸಲಾಯಿತು. 10 ವರ್ಷಗಳ ನಂತರ 1995ರಲ್ಲಿ ಮೊದಲ ರಾಜ್ಯ ಸಮ್ಮೇಳನವನ್ನು ಐತಿಹಾಸಿಕ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಮೊದಲು ಅಂಗವಿಕಲ ನೌಕರರಿಗೆ ಸಂಬಂಧಿಸಿದ ಯಾವುದೇ ಆದೇಶ, ಸುತ್ತೋಲೆ, ಅಧಿಕೃತ ಜ್ಞಾಪನಗಳು ಒಂದು ಕಡೆ ದೊರಕದೇ ಅಂಗವಿಕಲ ನೌಕರರು ಕಛೇರಿಗಳಿಗೆ ಅಲೆದಾಡಬೇಕಾಗಿತ್ತು. ಅಂತಹ ಸಂದರ್ಭದಲ್ಲಿ ಅಂಗವಿಕಲ ನೌಕರರಿಗೆ ಸಂಬಂಧಿಸಿದ ಎಲ್ಲಾ ಆದೇಶಗಳು, ಸುತ್ತೋಲೆಗಳು ಮತ್ತು ಅಧಿಕೃತ ಜ್ಞಾಪನಗಳನ್ನು ಒಂದೆಡೆ ಸೇರಿಸಿ ಮೊದಲನೇ ಸಮ್ಮೇಳನದ ಸಂದರ್ಭದಲ್ಲಿ ಸ್ಮರಣ ಸಂಚಿಕೆ ರೂಪದಲ್ಲಿ ಹೊರತರಲಾಯಿತು. ಸದರಿ ಸ್ಮರಣ ಸಂಚಿಕೆಯು ಅಂಗವಿಕಲ ನೌಕರರಿಗೆ ಕೈಪಿಡಿಯಾಗಿ ಯಶಸ್ವಿಯಾಯಿತು. 2ನೇ ರಾಜ್ಯ ಸಮ್ಮೇಳನವನ್ನು ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಹೆಚ್.ಕೆ.ರಾಮು ರವರ ನೇತೃತ್ವದಲ್ಲಿ ಕಲಾಭವನದಲ್ಲಿ ಯಶಸ್ವಿಯಾಗಿ ಸಂಘಟಿಸಲಾಯಿತು. ಆ ಸಂದರ್ಭದಲ್ಲೂ ಸ್ಮರಣ ಸಂಚಿಕೆಯನ್ನು ಹೊರತರಲಾಯಿತು. ತದನಂತರ ಗುಲ್ಬರ್ಗ ನಗರದಲ್ಲಿ ಶ್ರೀ ಶಾಂತಪ್ಪ ಸಂಗಾವಿ ರವರ ನೇತೃತ್ವದಲ್ಲಿ ವಿಭಾಗೀಯ ಸಮ್ಮೇಳನವನ್ನು ತ್ಯಂತ ಯಶಸ್ವಿಯಾಗಿ ಸಂಘಟಿಸಲಾಯಿತು. ಜಿಲ್ಲಾ ಸಮಾವೇಶಗಳು ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಯಶಸ್ವಿಯಾಗಿ ಜರುಗಿವೆ. ಸಂಘದ ಬೆಳ್ಳಿಹಬ್ಬದ ಸಮಾರಂಭವನ್ನು 2013ರಲ್ಲಿ ಪುನ: ಬೆಂಗಳೂರಿನ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ಈ ಸಮ್ಮೇಳನಕ್ಕೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಂದ ಒಂದು ಸಾವಿರಕ್ಕೂ ಮಿಗಿಲಾಗಿ ಪ್ರತಿನಿಧಿಗಳು ಬಂದು ಪಾಲ್ಗೊಂಡಿದ್ದರು.
ಮತ್ತಷ್ಟು ಓದುದಿನಾಂಕ 12-01-2018ನೇ ಶುಕ್ರವಾರ, ಬೆಳಿಗ್ಗೆ 11:00 ಘಂಟೆಗೆ
ಸ್ಥಳ:
ನಂ. 419, ಸಮ್ಮೇಳನ ಸಭಾಂಗಣ, 4ನೇ ಮಹಡಿ, ವಿಕಾಸಸೌಧ, ಬೆಂಗಳೂರು-01.